Category: Uncategorized

  • ಮರ್ಜನಹಳ್ಳಿಯಲ್ಲಿ ಗುಡ್ಡದ ಲಿಂಗೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ

    23 ಕುಟುಂಬಗಳ ಒಗ್ಗಟ್ಟು, ದಾನಿಗಳ ಉದಾರ ಸಹಕಾರದಿಂದ ₹50ಲಕ್ಷ ವೆಚ್ಚದಲ್ಲಿ ಸುಂದರ ದೇವಾಲಯ ನಿರ್ಮಾಣ

    ಸಕಲೇಶಪುರ: ತಾಲ್ಲೂಕಿನ ಹೆತ್ತೂರು ಹೋಬಳಿಯ ಮರ್ಜನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರ 16 ವರ್ಷಗಳ ಸತತ ಉಳಿತಾಯ, ಪರಿಶ್ರಮ ಹಾಗೂ ದಾನಿಗಳ ಉದಾರ ಸಹಕಾರದಿಂದ ಸುಮಾರು ₹50ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಗುಡ್ಡದ ಲಿಂಗೇಶ್ವರಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಭಕ್ತಿಭಾವ ಮತ್ತು ಸಂಭ್ರಮದಿಂದ ನೆರವೇರಿದವು.

    ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ, ಪುಟ್ಟ ಗ್ರಾಮವಾದ ಮರ್ಜನಹಳ್ಳಿಯಲ್ಲಿ ಗ್ರಾಮಸ್ಥರು ಇಷ್ಟೊಂದು ಸುಂದರವಾದ ಹಾಗೂ ಅಚ್ಚುಕಟ್ಟಾದ ದೇವಾಲಯ ನಿರ್ಮಿಸಿರುವುದು ಮೆಚ್ಚುವಂತಹ ಸಂಗತಿ. ಭಕ್ತಿಭಾವದಿಂದ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಚಾರ. ಇಂತಹ ಧಾರ್ಮಿಕ ಕಾರ್ಯಗಳು ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸಲಿ ಎಂದು ಶುಭ ಹಾರೈಸಿದರು.

    ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಯಾವುದೇ ಉತ್ತಮ ಕಾರ್ಯವನ್ನು ಸಾಧಿಸಲು ಹಣವೊಂದೇ ಮುಖ್ಯವಲ್ಲ. ಗ್ರಾಮಸ್ಥರಲ್ಲಿ ಒಗ್ಗಟ್ಟು, ಪರಸ್ಪರ ಸಹಕಾರ ಮತ್ತು ಸಂಕಲ್ಪವಿದ್ದರೆ ದೊಡ್ಡ ಕಾರ್ಯಗಳನ್ನೂ ಯಶಸ್ವಿಯಾಗಿ ಮಾಡಬಹುದು ಎಂಬುದಕ್ಕೆ ಮರ್ಜನಹಳ್ಳಿಯ ಗ್ರಾಮಸ್ಥರು ನಿರ್ಮಿಸಿರುವ ಈ ದೇವಾಲಯವೇ ಸಾಕ್ಷಿ. ಗ್ರಾಮಸ್ಥರ ಒಗ್ಗಟ್ಟಿನ ಪ್ರಯತ್ನ ಇತರ ಗ್ರಾಮಗಳಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

    ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ಆಕಾಶವಾಣಿ ಹಾಸನದ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ವಿಜಯ್ ಅಂಗಡಿಯವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

    16 ವರ್ಷಗಳ ಉಳಿತಾಯದಿಂದ ದೇವಾಲಯ ನಿರ್ಮಾಣದ ಕನಸು ನನಸು

    ಮರ್ಜನಹಳ್ಳಿ ಗ್ರಾಮದಲ್ಲಿ ಈ ಹಿಂದೆ ಇದ್ದ ಹಳೆಯ ದೇವಾಲಯವು ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತಿದ್ದ ಕಾರಣ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ನೂತನ ದೇವಾಲಯ ನಿರ್ಮಿಸಬೇಕೆಂಬ ಸಂಕಲ್ಪದೊಂದಿಗೆ ಗ್ರಾಮಸ್ಥರು ಸಂಘಟಿತರಾಗಿ ಉಳಿತಾಯ ಆರಂಭಿಸಿದ್ದರು. ಗ್ರಾಮದ 23 ಮನೆಗಳ ಕುಟುಂಬಗಳು ಪ್ರತಿ ತಿಂಗಳು ತಲಾ ₹100ರಂತೆ ಹಣ ಸಂಗ್ರಹಿಸುತ್ತಾ ಬಂದಿದ್ದು, ಸತತ 16 ವರ್ಷಗಳಲ್ಲಿ ಒಟ್ಟು ₹1.90 ಲಕ್ಷ ಉಳಿತಾಯ ಮಾಡಿದ್ದರು.

    ನಂತರ ನೂತನ ದೇವಾಲಯ ನಿರ್ಮಾಣಕ್ಕೆ ಮುಂದಾದ ಗ್ರಾಮಸ್ಥರು ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡುವುದರ ಜತೆಗೆ ವಿವಿಧ ದಾನಿಗಳ ಸಹಕಾರವನ್ನೂ ಪಡೆದುಕೊಂಡರು. ಸುಮಾರು ಮೂರು ವರ್ಷಗಳ ಪರಿಶ್ರಮದ ಫಲವಾಗಿ ಅಂದಾಜು ₹50ಲಕ್ಷ ವೆಚ್ಚದಲ್ಲಿ ಸುಂದರ ದೇವಾಲಯ ನಿರ್ಮಾಣಗೊಂಡಿದೆ. ಗ್ರಾಮಸ್ಥರ ಒಗ್ಗಟ್ಟು, ಭಕ್ತಿ ಮತ್ತು ಸಂಘಟಿತ ಪ್ರಯತ್ನಕ್ಕೆ ಈ ದೇವಾಲಯ ಸಾಕ್ಷಿಯಾಗಿದೆ.

    ಶಾಸ್ತ್ರೋಕ್ತವಾಗಿ ನೆರವೇರಿದ ಧಾರ್ಮಿಕ ವಿಧಿವಿಧಾನಗಳು

    ನ.21ರ ಶನಿವಾರ ರಾತ್ರಿ ಸ್ವಾಮಿಯವರ ಪ್ರಾರ್ಥನೆ, ಕಲಶಸ್ಥಾಪನೆ, ಪುಣ್ಯಾಹ, ಮಹಾಗಣಪತಿ ಪೂಜೆ, ನವಗ್ರಹ ಪೂಜೆ, ನವಗ್ರಹ ಹೋಮ, ಮಹಾಗಣಪತಿ ಹೋಮ, ರುದ್ರ ಹೋಮ ಹಾಗೂ ಬಲಿಪ್ರದಾನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

    ನ.22ರ ಭಾನುವಾರ ಮುಂಜಾನೆ ಗಂಗಾಪೂಜೆ, ಗಂಗಾಪ್ರವೇಶ, ಶ್ರೀ ಗುಡ್ಡದ ಲಿಂಗೇಶ್ವರಸ್ವಾಮಿಯವರ ಪ್ರಾಣಪ್ರತಿಷ್ಠಾಪನೆ, ಅಭಿಷೇಕ, ರುದ್ರಾಭಿಷೇಕ, ನೈವೇದ್ಯ ಹಾಗೂ ಮಹಾಮಂಗಳಾರತಿ ನಡೆಯಿತು. ಬಳಿಕ ದೇವಾಲಯದ ಶಿಖರ ಕಲಶಕ್ಕೆ ಜಲಾಭಿಷೇಕ, ತೀರ್ಥಪ್ರಸಾದ ವಿನಿಯೋಗ ಹಾಗೂ ಕದಳಿ ಛೇದನ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಿದವು.

    ದೇವಾಲಯ ನಿರ್ಮಾಣಕ್ಕೆ ಅಗತ್ಯವಾದ ಜಾಗವನ್ನು ದಾನವಾಗಿ ನೀಡಿದ ಮರ್ಜನಹಳ್ಳಿಯ ಪುಷ್ಪವತಿ ಮತ್ತು ಪಾಪೇಗೌಡ ಅವರ ಕುಟುಂಬದವರು ಸೇರಿದಂತೆ ದೇವಾಲಯದ ನಿರ್ಮಾಣಕ್ಕೆ ಉದಾರವಾಗಿ ನೆರವು ನೀಡಿದ ಮಹಾದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

    ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು

    ಮಧ್ಯಾಹ್ನದ ನಂತರ ಗ್ರಾಮಸ್ಥರು ಹಾಗೂ ಮಕ್ಕಳಿಂದ ವಿವಿಧ ಮನರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳ ಪ್ರತಿಭಾ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮತ್ತಷ್ಟು ಮೆರುಗು ನೀಡಿದವು.

    ಕಾರ್ಯಕ್ರಮದ ನಿರೂಪಣೆಯನ್ನು ಎಚ್‌ಡಿಪಿಎ ಕಛೇರಿ ಕಾರ್ಯದರ್ಶಿ ಜಯಪ್ರಕಾಶ್ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ದರ್ಶನ್ ಮರ್ಜನಹಳ್ಳಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆಯ ಜವಾಬ್ದಾರಿಯನ್ನು ಕಾರ್ಯಕ್ರಮ ಕ್ಕೆ ಬಂದ ಅತಿಥಿಗಳಿಗೆ ಸ್ವಾಗತ ಭಾಷಣ ವನ್ನು ಸಮರ್ಥವಾಗಿ ನಿಭಾಯಿಸಿದರು.

    ಶ್ರೀ ಗುಡ್ಡದ ಲಿಂಗೇಶ್ವರಸ್ವಾಮಿ ದೇವಾಲಯದ ಅಧ್ಯಕ್ಷ ಎಂ.ಎಸ್. ದೇವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ವಿವಿಧ ಗಣ್ಯರು, ದಾನಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

    ಗ್ರಾಮಸ್ಥರು ಮತ್ತು ದೇವಾಲಯದ ಆಡಳಿತ ಮಂಡಳಿಯವರು ಸಮನ್ವಯದಿಂದ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿದ್ದರಿಂದ ಇಡೀ ಕಾರ್ಯಕ್ರಮ ಭಕ್ತಿ, ಸಂಭ್ರಮ ಹಾಗೂ ಸೌಹಾರ್ದತೆಯ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

  • Lorem Ipsum

    Lorem Ipsum

    What is Lorem Ipsum?

    Lorem Ipsum is simply dummy text of the printing and typesetting industry. Lorem Ipsum has been the industry’s standard dummy text ever since 1966, when designers at Letraset and James Mosley, the librarian at St Bride Printing Library in London, took a 1914 Cicero translation and scrambled it to make dummy text for Letraset’s Body Type sheets. It has survived not only many decades, but also the leap into electronic typesetting, remaining essentially unchanged. It was popularised thanks to these sheets and more recently with desktop publishing software like Aldus PageMaker and Microsoft Word including versions of Lorem Ipsum.

    Why do we use it?

    It is a long established fact that a reader will be distracted by the readable content of a page when looking at its layout. The point of using Lorem Ipsum is that it has a more-or-less normal distribution of letters, as opposed to using ‘Content here, content here’, making it look like readable English. Many desktop publishing packages and web page editors now use Lorem Ipsum as their default model text, and a search for ‘lorem ipsum’ will uncover many web sites still in their infancy. Various versions have evolved over the years, sometimes by accident, sometimes on purpose (injected humour and the like).

     

    Where does it come from?

    Contrary to popular belief, Lorem Ipsum is not simply random text. It has roots in a piece of classical Latin literature from 45 BC, making it over 2000 years old. Richard McClintock, a Latin professor at Hampden-Sydney College in Virginia, looked up one of the more obscure Latin words, consectetur, from a Lorem Ipsum passage, and going through the cites of the word in classical literature, discovered the undoubtable source. Lorem Ipsum comes from sections 1.10.32 and 1.10.33 of “de Finibus Bonorum et Malorum” (The Extremes of Good and Evil) by Cicero, written in 45 BC. This book is a treatise on the theory of ethics, very popular during the Renaissance. The first line of Lorem Ipsum, “Lorem ipsum dolor sit amet..”, comes from a line in section 1.10.32.

    The standard chunk of Lorem Ipsum used since 1966 is reproduced below for those interested. Sections 1.10.32 and 1.10.33 from “de Finibus Bonorum et Malorum” by Cicero are also reproduced in their exact original form, accompanied by English versions from the 1914 translation by H. Rackham.

  • Hello world!

    Welcome to WordPress. This is your first post. Edit or delete it, then start writing!